ಮೋದಿಗೆ instagram ನಲ್ಲಿ 10 ಕೋಟಿ ಫಾಲೋವರ್ಸ್
ಪ್ರದಾನ ಮಂತ್ರಿ ನರೇಂದ್ರ ಮೋದಿಯವರು ಸಾಮಾಜಿಕ ಜಾಲತಾಣ instagram ನಲ್ಲಿ 10 ಕೋಟಿ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಈ ಮೂಲಕ instagram ನಲ್ಲಿ ಅತೀ ಹೆಚ್ಚು followers ಗಳನ್ನು ಹೊಂದಿದ ರಾಜಕಾರಣಿ ಹಾಗೂ ವಿಶ್ವದ ಮೊದಲ ನಾಯಕ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಮೋದಿಯವರು 2014 ರಲ್ಲಿ ಪ್ರಧಾನಿಯಾದ ನಂತರ instagram account ಓಪನ್ ಮಾಡಿದರು. ಕಳೆದ 10 ವರ್ಷಗಳಲ್ಲಿ ಅವರ ಖಾತೆಯು ಜಾಗತಿಕ ನಾಯಕರ ಪೈಕಿ ಅತ್ಯಂತ ಹೆಚ್ಚು ಜನರನ್ನು ಸೆಳೆಯುವ ಡಿಜಿಟಲ್ ತಾಣಗಳಲ್ಲಿ ಒಂದಾಗಿ ಹೊರಹೊಮ್ಮಿದೆ. instagram ನಲ್ಲಿ ಮೋದಿ 10 ಕೋಟಿ ಫಾಲೋವರ್ಸ್ ಹೊಂದಿರುವುದು ಜಾಗತಿಕ ಮಟ್ಟದಲ್ಲಿ ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ಯೋಗಿ ಸೆಕೆಂಡ್ :- instagram ನಲ್ಲಿ ಅತೀ ಹೆಚ್ಚು followers ಗಳನ್ನು ಹೊಂದಿದ ಭಾರತದ ನಾಯಕರಲ್ಲಿ ಮೋದಿ ಮೊದಲನೆಯ ಸ್ಥಾನದಲ್ಲಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು 1.61 ಕೋಟಿ ಫಾಲೋವರ್ಸ ಗಳನ್ನು ಹೊಂದುವ ಮೂಲಕ 2ನೇ ಸ್ಥಾನದಲ್ಲಿದ್ದಾರೆ. ನಂತರ ಲೋಕಸಭೆ ಪ್ರತಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರು (1.26) ಹೊಂದಿದ್ದಾರೆ.
Instagram ನಲ್ಲಿ ಅತೀ ಹೆಚ್ಚು followers ಗಳನ್ನ ಹೊಂದಿರುವ ಟಾಪ್ 5 ಜಾಗತಿಕ ನಾಯಕರು.
1.ನರೇಂದ್ರ ಮೋದಿ (ಪ್ರಧಾನಿ, ಭಾರತ) –10 ಕೋಟಿ
2. ಡೊನಾಲ್ಡ್ ಟ್ರಂಪ್ (ಅಧ್ಯಕ್ಷ, ಅಮೆರಿಕ) – 4.32 ಕೋಟಿ
3.ಪ್ರೊಬೋವೊ ಸುಬಿಯಾಂಟ್ಯೊ (ಅಧ್ಯಕ್ಷ, ಇಂಡೋನೇಷ್ಯಾ) – 1.05 ಕೋಟಿ
4.ಲೂಯಿಸ್ ಇನ್ಯಾಸಿಯೋ ಲುಲಾ ಡ ಸಾಲ್ವಾ ಮೋದಿಗೆ instagram ನಲ್ಲಿ 10 ಕೋಟಿ ಫಾಲೋವರ್ಸ್(ಅಧ್ಯಕ್ಷ, ಬ್ರೆಜಿಲ್) – 1.44ಕೋಟಿ
5. ರೆಸೆಪ್ ತಯ್ಯಾಪ್ ಎರ್ಡೊಗನ್ (ಅಧ್ಯಕ್ಷ, ಟರ್ಕಿ) – 1.16 ಕೋಟಿ
ಟ್ರಂಪ್ ಗಿಂತ ದುಪ್ಪಟ್ಟು
ಪ್ರಧಾನಿ ನರೇಂದ್ರ ಮೋದಿ followers ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಂದಿರುವ ಫಾಲೋವರ್ಸ್ ಗಳ ಸಂಖ್ಯೆಯ ದುಪ್ಪಟ್ಟಿಗಿಂತಲೂ ಹೆಚ್ಚು ಹೆಚ್ಚು ಎನ್ನುವುದು ಗಮನಾರ್ಹ.
Instagram ಎನ್ನುವುದು ಸಾಮಾಜಿಕ ಜಾಲತಾಣಗಳಲ್ಲಿ ಒಂದು. ಇದನ್ನು ಬಳಸಿಕೊಂಡು ಅನೇಕ ಎಷ್ಟೋ ಜನರು ಅನುಕೂಲ ಪಡೆಯುತ್ತಿದ್ದಾರೆ. ಈ ಜಾಲತಾಣ ಉಪಯೋಗಿಸುವ ಜನರು ಪ್ರಪಂಚದಾದ್ಯಂತ ಇದ್ದಾರೆ. ಇದರಿಂದ ನಮ್ಮ ಸಮಾಜದ ನಾಯಕರು ಜನರಿಗೆ ತಲುಪಿಸಬೇಕಾದ ವಿಷಯಗಳನ್ನು ತಮ್ಮ instagram ಖಾತೆಯಲ್ಲಿ ಹಾಕಿದರೆೆ ಎಲ್ಲರಿಗೂ ಕ್ಷಣಮಾತ್ರದಲ್ಲಿ ತಲುಪುತ್ತದೆ.